ಸಂಗನಕಲ್ಲು ಬಳ್ಳಾರಿ ಜಿಲ್ಲೆಯಲ್ಲಿರುವ ನವಶಿಲಾಯುಗದ ಪುರಾತತ್ವ ತಾಣವಾಗಿದೆ. ಇದು ಸುಮಾರು ಕ್ರಿ.ಪೂ. 3000ರ ಕಾಲಕ್ಕೆ ಸೇರಿದದ್ದು. ಈ ತಾಣವು ಸುಮಾರು 1,000 ಎಕರೆ ವಿಸ್ತೀರ್ಣ ಹೊಂದಿದ್ದು ದಕ್ಷಿಣ ಭಾರತದ ಅತ್ಯಂತ ಹಳೆಯ ವಸಾಹತುಗಳಲ್ಲಿ ಒಂದಾಗಿದೆ. ಇಲ್ಲಿ ಮಡಿಕೆಗಳು, ಕಲ್ಲಿನ ಕೊಡಲಿಗಳು ಹಾಗೂ ಇತರ ಉಪಕರಣಗಳು ಪತ್ತೆಯಾಗಿವೆ. ಈ ತಾಣವನ್ನು 1946ರಲ್ಲಿ ಬೆಂಡಪುಡಿ ಸುಬ್ಬರಾವ್ ಉತ್ಖನನ ಮಾಡಿದರು ಮತ್ತು 1964ರಲ್ಲಿ ಮತ್ತೆ ಉತ್ಖನನ ನಡೆಯಿತು.
This Question is Also Available in:
English