ಭೋಗರಾಜು ಪಟ್ಟಾಭಿ ಸೀತಾರಾಮಯ್ಯ
1939ರ ತ್ರಿಪುರಿ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧೀಜಿ ಭೋಗರಾಜು ಪಟ್ಟಾಭಿ ಸೀತಾರಾಮಯ್ಯ ಅವರನ್ನು ತಮ್ಮ ಅಭ್ಯರ್ಥಿಯಾಗಿ ಬೆಂಬಲಿಸಿದರು. ಸುಭಾಷ್ ಚಂದ್ರ ಬೋಸ್ ಈ ಚುನಾವಣೆಯಲ್ಲಿ 203 ಮತಗಳ ಅಂತರದಿಂದ ಜಯಗಳಿಸಿದರು. ಬೋಸ್ ಅವರಿಗೆ ಒಟ್ಟು 1580 ಮತಗಳು ಬಂದರೆ, ಪಟ್ಟಾಭಿ ಸೀತಾರಾಮಯ್ಯ ಅವರಿಗೆ 1377 ಮತಗಳು ಲಭಿಸಿತು. ಬಳಿಕ ಗಾಂಧೀಜಿ ಮತ್ತು ಅವರ ಅನುಯಾಯಿಗಳು ಬೋಸ್ ಅವರ ಅಧ್ಯಕ್ಷತೆಗೆ ವಿರೋಧ ವ್ಯಕ್ತಪಡಿಸಿದರು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ 12 ಸದಸ್ಯರು ಒಟ್ಟಾಗಿ ರಾಜೀನಾಮೆ ಸಲ್ಲಿಸಿದರು. ನಂತರ ಜವಾಹರಲಾಲ್ ನೆಹರು ಕೂಡ ರಾಜೀನಾಮೆ ನೀಡಲು ನಿರ್ಧರಿಸಿದರು.
This Question is Also Available in:
Englishहिन्दी