ಸಿಂಧೂ ನದಿ ಪಾಕಿಸ್ತಾನದ ಮೂಲಕ ಹರಿಯುವ ಪ್ರಮುಖ ನದಿಯಾಗಿದೆ. ಇದು ಪಶ್ಚಿಮ ಟಿಬೆಟ್ (ಚೀನಾ) ಹಾಗೂ ಉತ್ತರ ಭಾರತದ ಭಾಗಗಳಲ್ಲಿಯೂ ಹರಿಯುತ್ತದೆ. ಮಾನಸ ಸರೋವರದ ಸಮೀಪದ ಟಿಬೆಟಿಯನ್ ಪೀಠಭೂಮಿಯಲ್ಲಿ ಈ ನದಿ ಉದ್ಭವಿಸಿ, ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶ, ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಮೂಲಕ ಹರಿದು, ಪಾಕಿಸ್ತಾನದಾದ್ಯಂತ ದಕ್ಷಿಣದತ್ತ ಹರಿದು ಸಿಂಧ್‌ನ ಕರಾಚಿ ಸಮೀಪ ಅರೇಬಿಯನ್ ಸಮುದ್ರದಲ್ಲಿ ಸೇರುತ್ತದೆ. ಈ ನದಿಯ ಸಾಂಪ್ರದಾಯಿಕ ಮೂಲವೆಂದರೆ ಸೆಂಗೆ ಖಬಾಬ್ ಅಥವಾ ‘ಸಿಂಹದ ಬಾಯಿ’, ಇದು ಪವಿತ್ರ ಕೈಲಾಸ ಪರ್ವತದ ಸಮೀಪದಲ್ಲಿರುವ ಶಾಶ್ವತ ಬುಗ್ಗೆ.
This Question is Also Available in:
Englishहिन्दी