Q. ಭಾರತದ ಮೊದಲ ಪರಾಗಸ್ಪರ್ಶಕ ಉದ್ಯಾನವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
Answer:
ಉತ್ತರಾಖಂಡ
Notes: ಭಾರತದ ಮೊದಲ ಪರಾಗಸ್ಪರ್ಶಕ ಉದ್ಯಾನವನ್ನು ಉತ್ತರಾಖಂಡದ ನೈನಿತಾಲ್ ನಗರದಲ್ಲಿ ಸ್ಥಾಪಿಸಲಾಗಿದೆ. ಉತ್ತರಾಖಂಡ್ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದ ವತಿಯಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ. <br /> ಸುಮಾರು ನಾಲ್ಕು ಎಕರೆಗಿಂತ ಹೆಚ್ಚು ಜಾಗದಲ್ಲಿ ಅಭಿವೃದ್ಧಿ ಪಡಿಸಿರುವ ಈ ಉದ್ಯಾನವನವು 40 ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳು, ಜೇನುಹುಳಗಳು, ಪಕ್ಷಿಗಳು ಮತ್ತು ಕೀಟಗಳನ್ನು ಹೊಂದಿದೆ. ಈ ಜಾತಿಯ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಉದ್ಯಾನ ಹೊಂದಿದೆ. ಈ ಜಾತಿಗಳ ಮೇಲೆ ಮಾಲಿನ್ಯದ ಪ್ರಭಾವ ಮತ್ತು ಆವಾಸಸ್ಥಾನಕ್ಕೆ ಅಡಗಿರುವ ಬೆದರಿಕೆಗಳ ಕುರಿತಾಗಿ ಸಂಶೋಧನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.