ಜಾರ್ಖಂಡ್‌ನ ಬುಡಕಟ್ಟು ಜನರು ನಿರ್ಮಿಸುವ ಪೈತ್ಕರ್ ಅಥವಾ ಸುರುಳಿ ಚಿತ್ರಗಳು ಭಾರತದ ಪ್ರಾಚೀನ ಚಿತ್ರಕಲೆ ಶೈಲಿಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿವೆ. ಈ ಚಿತ್ರಕಲೆ ಬಂಗಾಳದ ಮನೆಗಳಲ್ಲಿ ಜನಪ್ರಿಯ ದೇವಿಯಾದ ಮಾಂಸಾ ದೇವಿಯೊಂದಿಗೆ ಸಾಂಸ್ಕೃತಿಕ ಸಂಬಂಧ ಹೊಂದಿದೆ. ದಾನ, ಯಜ್ಞಾಚರಣೆ ಮುಂತಾದ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳು ಇದರ ಪ್ರಮುಖ ಅಂಶಗಳಾಗಿವೆ. ‘ಮನುಷ್ಯನಿಗೆ ಮರಣದ ನಂತರ ಏನಾಗುತ್ತದೆ?’ ಎಂಬುದು ಇದರ ಮುಖ್ಯ ವಿಷಯವಾಗಿದೆ. ಪ್ರಾಚೀನವಾದ ಈ ಚಿತ್ರಕಲೆ ನಿರಂತರ ಕುಸಿತದಿಂದ ಅಳಿವಿನ ಅಂಚಿನಲ್ಲಿದೆ.
This Question is Also Available in:
Englishहिन्दी