"ಟು ಪ್ಲಸ್ ಫೋರ್ ಒಪ್ಪಂದ"ದ ಮೂಲಕ ಜರ್ಮನಿಯ ಏಕೀಕರಣ ಸಾಧಿಸಲಾಯಿತು. "ಜರ್ಮನಿಗೆ ಸಂಬಂಧಿಸಿದ ಅಂತಿಮ ಇತ್ಯರ್ಥ ಒಪ್ಪಂದ"ವೆಂದು ಕರೆಯಲ್ಪಡುವ ಈ ಒಪ್ಪಂದವು 1990ರಲ್ಲಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಮತ್ತು ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್ ಜೊತೆಗೆ ಎರಡನೇ ಮಹಾಯುದ್ಧದ ಅಂತ್ಯದಲ್ಲಿ ಜರ್ಮನಿಯನ್ನು ಆಕ್ರಮಿಸಿದ್ದ ನಾಲ್ಕು ಶಕ್ತಿಗಳಾದ ಫ್ರಾನ್ಸ್, ಸೋವಿಯತ್ ಯೂನಿಯನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಸಂಯುಕ್ತ ಸಂಸ್ಥಾನಗಳ ನಡುವೆ ನಡೆಯಿತು. ಈ ಒಪ್ಪಂದದ ಮೂಲಕ ಆ ನಾಲ್ಕು ಶಕ್ತಿಗಳು ಜರ್ಮನಿಯ ಮೇಲಿನ ತಮ್ಮ ಹಕ್ಕುಗಳನ್ನು ತ್ಯಜಿಸಿತು. ಪರಿಣಾಮವಾಗಿ ಏಕೀಕೃತ ಜರ್ಮನಿಗೆ ಸಂಪೂರ್ಣ ಸಾರ್ವಭೌಮತ್ವ ದೊರಕಿತು. ಜೊತೆಗೆ ಜರ್ಮನಿ ಪೋಲೆಂಡ್‌ನೊಂದಿಗೆ ಇರುವ ಗಡಿಯನ್ನು ಮಾನ್ಯಗೊಳಿಸಿ ಇತರ ಯಾವುದೇ ಪ್ರಾದೇಶಿಕ ಹಕ್ಕುಗಳನ್ನು ತ್ಯಜಿಸಿತು.
This Question is Also Available in:
Englishहिन्दी