1998ರಿಂದ 2003ರವರೆಗೆ ನಡೆದ ಎರಡನೇ ಕಾಂಗೋ ಯುದ್ಧವನ್ನು "ಆಫ್ರಿಕಾ ಮಹಾ ಯುದ್ಧ" ಅಥವಾ "ಮಹಾ ಆಫ್ರಿಕನ್ ಯುದ್ಧ" ಎಂದು ಕರೆಯಲಾಗುತ್ತದೆ. ಕಾಂಗೋ ಪ್ರದೇಶದಿಂದ ರುವಾಂಡಾ ಮತ್ತು ಉಗಾಂಡಾ ಸೇನಾ ಪಡೆಗಳನ್ನು ಹೊರಹಾಕುವ ಹಿನ್ನೆಲೆಯಲ್ಲೇ ಈ ಯುದ್ಧ ಆರಂಭವಾಯಿತು. ಈ ಯುದ್ಧವು ದೀರ್ಘಕಾಲ ಸೈನಿಕ ಸ್ಥಬ್ಧತೆಯನ್ನು ಉಂಟುಮಾಡಿತು. ಪ್ರಿಟೋರಿಯಾ ಒಪ್ಪಂದದ ಮೂಲಕ ರುವಾಂಡಾ ಸೇನೆಗಳನ್ನು ಕಾಂಗೋ ಪ್ರದೇಶದಿಂದ ಹಿಂತೆಗೆದುಕೊಳ್ಳುವಂತೆ ನಿರ್ಧರಿಸಲಾಯಿತು.
This Question is Also Available in:
Englishहिन्दी