ಅಮೃತ್ (ಅಫೋರ್ಡಬಲ್ ಮೆಡಿಸಿನ್ಸ್ ಅಂಡ್ ರಿಲೈಯಬಲ್ ಇಂಪ್ಲಾಂಟ್ಸ್ ಫಾರ್ ಟ್ರೀಟ್ಮೆಂಟ್) ಕಾರ್ಯಕ್ರಮವನ್ನು ಯಾವ ಸಚಿವಾಲಯ ಆರಂಭಿಸಿತು?ಅಮೃತ್ ಕಾರ್ಯಕ್ರಮವನ್ನು 2015ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಆರಂಭಿಸಿತು. ಇದರ ಉದ್ದೇಶ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ರೋಗಿಗಳಿಗೆ ಕಡಿಮೆ ಬೆಲೆಯ ಔಷಧಿಗಳು ಹಾಗೂ ಇಂಪ್ಲಾಂಟ್ಗಳನ್ನು ಒದಗಿಸುವುದು. ಮೊದಲ ಅಮೃತ್ ಔಟ್‌ಲೆಟ್ 15 ನವೆಂಬರ್ 2015ರಂದು ದೆಹಲಿಯ AIIMS ನಲ್ಲಿ ಆರಂಭವಾಯಿತು. ದೇಶದಾದ್ಯಂತ 10 ಹೊಸ ಅಮೃತ್ ಔಟ್‌ಲೆಟ್‌ಗಳನ್ನು ಆರಂಭಿಸಲಾಗಿದೆ. ಈ ಯೋಜನೆಯನ್ನು ಹೆಚ್ಎಲ್ಎಲ್ ಲೈಫ್‌ಕೇರ್ ಲಿಮಿಟೆಡ್ ನಿಂದ ಕಾರ್ಯಗತಗೊಳಿಸಲಾಗುತ್ತಿದೆ.