ಕೇಂದ್ರ ವಿದ್ಯುತ್ ಸಚಿವಾಲಯದ ಪ್ರಕಾರ, ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಉಷ್ಣ ವಿದ್ಯುತ್ (ಕಲ್ಲಿದ್ದಲು, ಅನಿಲ ಮತ್ತು ತೈಲ) ಶೇ. 68.2 ರಷ್ಟಿದೆ (31.01.2017ರ ಸ್ಥಿತಿಗೆ). ಭಾರತದ ವಿದ್ಯುತ್ ಕ್ಷೇತ್ರವು ದೇಶದಲ್ಲಿ ಉತ್ಪಾದಿಸುವ ಕಲ್ಲಿದ್ದಲಿನ ಸುಮಾರು 72% ಅನ್ನು ಉಪಯೋಗಿಸುತ್ತದೆ. ಜಲ ವಿದ್ಯುತ್‌ನ ಪಾಲು ಶೇ. 14.0 ರಷ್ಟಿದ್ದು, ಪರಮಾಣು ವಿದ್ಯುತ್ ಶೇ. 1.8 ರಷ್ಟು ಮಾತ್ರ ಕೊಡುಗೆ ನೀಡುತ್ತದೆ. ಎಲ್ಲಾ ನವೀಕರಿಸಬಹುದಾದ ಇಂಧನ ಮೂಲಗಳಿಂದ ಒಟ್ಟು ವಿದ್ಯುತ್ ಉತ್ಪಾದನೆ ಸುಮಾರು ಶೇ. 15 ರಷ್ಟಿದೆ.
This Question is Also Available in:
Englishहिन्दी