ಈಸ್ಟ್ ಇಂಡಿಯಾ ಅಸೋಸಿಯೇಷನ್ ಅನ್ನು 1866ರಲ್ಲಿ ದಾದಾಭಾಯಿ ನೌರೋಜಿ ಅವರು ಲಂಡನ್‌ನಲ್ಲಿದ್ದ ಭಾರತೀಯರು ಮತ್ತು ನಿವೃತ್ತ ಬ್ರಿಟಿಷ್ ಅಧಿಕಾರಿಗಳ ಸಹಯೋಗದೊಂದಿಗೆ ಸ್ಥಾಪಿಸಿದರು. ಎಲ್ಲಾ ಭಾರತೀಯ ವಿಚಾರಗಳ ಬಗ್ಗೆ ಬ್ರಿಟಿಷ್ ಸಾರ್ವಜನಿಕರು ಹಾಗೂ ಬ್ರಿಟಿಷ್ ಸಂಸತ್ತಿನ ಸದಸ್ಯರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಸಂಘವನ್ನು ರಚಿಸಲಾಯಿತು. ಇದು ಭಾರತೀಯರ ಕುಂದುಕೊರತೆಗಳನ್ನು ವ್ಯಕ್ತಪಡಿಸಿ, ಅವಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸಿತು. ಇದರ ಮೊದಲ ಅಧ್ಯಕ್ಷರು ಲಾರ್ಡ್ ಲೈವೆಡೆನ್ ಆಗಿದ್ದರು.
This Question is Also Available in:
Englishहिन्दी