ವಿಶ್ವನಾಥ್ ಕಾರ್ತಿಕೇ ಪದಕಂಟಿ
ಹೈದರಾಬಾದ್‌ನ ಕಿಶೋರ ವಿಶ್ವನಾಥ್ ಕಾರ್ತಿಕೇ ಪದಕಂಟಿ ಇತ್ತೀಚೆಗೆ ಸೇವನ್ ಸಮಿಟ್ಸ್ ಚಾಲೆಂಜ್ ಅನ್ನು ಪೂರ್ಣಗೊಳಿಸಿದ ಅತ್ಯಂತ ಕಿರಿಯ ಭಾರತೀಯನಾಗಿದ್ದಾರೆ. ವಿಶ್ವದಾದ್ಯಂತ ಇದನ್ನು ಸಾಧಿಸಿದ ಎರಡನೇ ಕಿರಿಯ ವ್ಯಕ್ತಿಯೂ ಆಗಿದ್ದಾರೆ. ಈ ಚಾಲೆಂಜ್ ಅಂದರೆ ಏಳು ಖಂಡಗಳಲ್ಲಿನ ಎತ್ತರವಾದ ಪರ್ವತಗಳನ್ನು ಹತ್ತುವುದು. ಇದನ್ನು ಮೊಟ್ಟಮೊದಲಾಗಿ 1985ರಲ್ಲಿ ರಿಚರ್ಡ್ ಬಾಸ್ ಎಂಬವರು ಪ್ರಸ್ತಾಪಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಈ ಪರ್ವತಗಳಲ್ಲಿ ಏಷ್ಯಾದಲ್ಲಿ ಮೌಂಟ್ ಎವರೆಸ್ಟ್, ದಕ್ಷಿಣ ಅಮೆರಿಕಾದಲ್ಲಿ ಅಕೋಂಕಾಗುವಾ, ಉತ್ತರ ಅಮೆರಿಕಾದಲ್ಲಿ ಡೆನಾಲಿ, ಆಫ್ರಿಕಾದಲ್ಲಿ ಕಿಲಿಮಂಜಾರೋ, ಯುರೋಪಿನಲ್ಲಿ ಎಲ್ಬ್ರಸ್, ಅನ್ಟಾರ್ಟಿಕಾದಲ್ಲಿ ಮೌಂಟ್ ವಿನ್ಸನ್ ಮತ್ತು ಆಸ್ಟ್ರೇಲಿಯಾದಲ್ಲಿ ಕೋಶಿಯಸ್ಕೊ ಅಥವಾ ಓಶಿಯಾನಿಯಾದಲ್ಲಿ ಪುಂಕಾಕ್ ಜಾಯಾ ಸೇರಿವೆ.
This Question is Also Available in:
Englishमराठीहिन्दी