ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ ಈಗಾಗಲೇ ಮಾಲಿನ್ಯಗೊಂಡಿರುವ ಹಿಂಡಾನ್ ನದಿಗೆ ದೊಡ್ಡ ಪ್ರಮಾಣದಲ್ಲಿ ಕೆಸರನ್ನು, ಮಣ್ಣನ್ನು ಮತ್ತು ಪೂಜಾ ಸಾಮಾಗ್ರಿಗಳನ್ನು ಸೇರಿಸಲಾಗಿದೆ. ಹಿಂಡಾನ್ ಯಮುನಾ ನದಿಗೆ ಉಪನದಿಯಾಗಿದ್ದು, ಮಳೆಯ ನೀರಿನಿಂದ ಪೋಷಿತವಾಗಿರುವ ನದಿ. ಇದು ಉತ್ತರ ಪ್ರದೇಶದ ಸಹಾರನ್‌ಪುರದ ಶಿವಾಲಿಕ್ ಬೆಟ್ಟಗಳಲ್ಲಿ ಸಮುದ್ರಮಟ್ಟದಿಂದ 800 ಮೀಟರ್ ಎತ್ತರದಲ್ಲಿ ಉಗಮವಾಗುತ್ತದೆ. 400 ಕಿಮೀ ದೂರವನ್ನು ಪಶ್ಚಿಮ ಉತ್ತರ ಪ್ರದೇಶದ ಕೈಗಾರಿಕಾ ಪ್ರದೇಶದ ಮೂಲಕ ಹರಿದು, ನೋಯ್ಡಾದಲ್ಲಿ ಯಮುನಾ ನದಿಯಲ್ಲಿ ಸೇರುತ್ತದೆ. ಇದರ ಮುಖ್ಯ ಉಪನದಿಗಳು ಕಾಳಿ (ಪಶ್ಚಿಮ) ಮತ್ತು ಕೃಷ್ಣಿ ನದಿಗಳು.
This Question is Also Available in:
Englishमराठीहिन्दी