Q. MIDORI ಜೈವವೈವಿಧ್ಯತೆ ಪ್ರಶಸ್ತಿ 2024 ಅನ್ನು ಯಾರಿಗೆ ನೀಡಲಾಗಿದೆ? Answer:
ವೇರಾ ವೊರೊನೋವಾ ಮತ್ತು ಇಸಬೆಲ್ ಅಗಸ್ಟಿನಾ ಕಾಲ್ಡೆರಾನ್ ಕಾರ್ಲೋಸ್
Notes: MIDORI ಜೈವವೈವಿಧ್ಯತೆ ಪ್ರಶಸ್ತಿ 2024 ಅನ್ನು ಕಝಕಿಸ್ತಾನದ ವೇರಾ ವೊರೊನೋವಾ ಮತ್ತು ಪೆರುವಿನ ಇಸಬೆಲ್ ಅಗಸ್ಟಿನಾ ಕಾಲ್ಡೆರಾನ್ ಕಾರ್ಲೋಸ್ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯನ್ನು AEON ಪರಿಸರ ಪ್ರತಿಷ್ಠಾನವು ಜೈವಿಕ ವೈವಿಧ್ಯತೆ ಒಪ್ಪಂದ (CBD :Convention on Biological Diversity ) ದೊಂದಿಗೆ ಸಹಯೋಗದಲ್ಲಿ ಸ್ಥಾಪಿಸಲಾಗಿದೆ. ಇದು ಜೈವವೈವಿಧ್ಯತೆ ಸಂರಕ್ಷಣೆ ಮತ್ತು ಸುಸ್ಥಿರತೆಗೆ ಗಣನೀಯ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸುತ್ತದೆ. ಈ ಪ್ರಶಸ್ತಿಯನ್ನು ಎರಡು ವರ್ಷಗಳಿಗೊಮ್ಮೆ ನೀಡಲಾಗುತ್ತದೆ.