Q. ಕೈಸ್ ಸಯೀದ್ ಅವರು ಯಾವ ದೇಶದ ರಾಷ್ಟ್ರಪತಿಗಳಾಗಿ ಮರು ಆಯ್ಕೆಯಾಗಿದ್ದಾರೆ? Answer:
ಟ್ಯುನೀಷಿಯಾ
Notes: ಟ್ಯುನೀಷಿಯಾದ ರಾಷ್ಟ್ರಪಪತಿ ಕೈಸ್ ಸಯೀದ್ ಅವರು 90.7% ಮತಗಳೊಂದಿಗೆ ಎರಡನೇ ಐದು ವರ್ಷಗಳ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಚುನಾವಣಾ ಫಲಿತಾಂಶವನ್ನು 7 ಅಕ್ಟೋಬರ್ 2024 ರಂದು ಟ್ಯುನೀಷಿಯಾದ ಸ್ವತಂತ್ರ ಉನ್ನತ ಚುನಾವಣಾ ಪ್ರಾಧಿಕಾರವು ಘೋಷಿಸಿತು. 6 ಅಕ್ಟೋಬರ್ 2024 ರಂದು ನಡೆದ ಚುನಾವಣೆಯಲ್ಲಿ 28.8% ರಷ್ಟು ದಾಖಲೆಯ ಕನಿಷ್ಠ ಮತದಾನ ನಡೆದಿದೆ. 2011 ರ ಜಾಸ್ಮಿನ್ ಕ್ರಾಂತಿಯ ನಂತರ ಪ್ರಜಾಪ್ರಭುತ್ವವನ್ನು ಪರಿಚಯಿಸಿದಾಗಿನಿಂದ ಇದು ಅತ್ಯಂತ ಕಡಿಮೆ ಮತದಾನದ ಪ್ರಮಾಣವಾಗಿದೆ. 2019 ರ ಚುನಾವಣೆಯಲ್ಲಿ ಮತದಾನದ ಪ್ರಮಾಣ 55% ಆಗಿತ್ತು.