Q. ವಿಶ್ವ ದೂರಸಂಪರ್ಕ ಗುಣಮಟ್ಟ ಸಭೆ (WTSA : World Telecommunication Standardization Assembly) 2024 ರ ಸ್ಥಳ ಯಾವುದು? Answer:
ನವದೆಹಲಿ
Notes: ವಿಶ್ವ ದೂರಸಂಪರ್ಕ ಗುಣಮಟ್ಟ ಸಭೆ (WTSA) ನವದೆಹಲಿಯಲ್ಲಿ ಅಕ್ಟೋಬರ್ 14 ರಿಂದ 24, 2024 ರವರೆಗೆ ನಡೆಯಲಿದೆ. WTSA 2002 ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಇದು ITU ಗುಣಮಟ್ಟ ವಿಭಾಗದ ಆಡಳಿತ ಸಮ್ಮೇಳನವಾಗಿದೆ. ಇದು ದೂರಸಂಪರ್ಕ ಗುಣಮಟ್ಟೀಕರಣಕ್ಕಾಗಿ ಅಧ್ಯಯನ ಗುಂಪುಗಳ ಕಾರ್ಯಕ್ರಮ ಮತ್ತು ರಚನೆಯನ್ನು ವ್ಯಾಖ್ಯಾನಿಸುತ್ತದೆ. WTSA 2024 ಅನ್ನು ಆಯೋಜಿಸುವುದು ಜಾಗತಿಕ ದೂರಸಂಪರ್ಕ ಮಾನದಂಡಗಳನ್ನು ನಿಗದಿಪಡಿಸುವಲ್ಲಿ ಭಾರತಕ್ಕೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ಕಾರ್ಯಕ್ರಮವು ಅಕ್ಟೋಬರ್ 14, 2024 ರಂದು ಜಾಗತಿಕ ಮಾನದಂಡಗಳ ಸಮ್ಮೇಳನ (GSS : Global Standards Symposium ) ದೊಂದಿಗೆ ಪ್ರಾರಂಭವಾಗಲಿದ್ದು, ICT ಗುಣಮಟ್ಟೀಕರಣ ನೀತಿ ಚರ್ಚೆಗಳ ಮೇಲೆ ಕೇಂದ್ರೀಕರಿಸಲಿದೆ.