ಜಿಕೆಟುಡೇ ಸಾಮಾನ್ಯ ಜ್ಞಾನ, ಸಾಮಾನ್ಯ ಅಧ್ಯಯನಗಳು, ಪ್ರಸ್ತುತ ವ್ಯವಹಾರಗಳ ಪ್ರಶ್ನೆಗಳು ಮತ್ತು ಎಲ್ಲಾ ಪರೀಕ್ಷೆಗಳಿಗೆ ಶೈಕ್ಷಣಿಕ ಅಧ್ಯಯನದ ಸಾಮಗ್ರಿಗಳನ್ನು ಒದಗಿಸುವ ಭಾರತದ ಅತಿದೊಡ್ಡ ಮತ್ತು ಅತ್ಯಂತ ಅಧಿಕೃತ ವೆಬ್ಸೈಟ್ ಆಗಿದೆ. ಜಿಕೆಟುಡೇ ಕನ್ನಡವು ಕರ್ನಾಟಕ ಪರೀಕ್ಷೆಗಳಾದ ಕೆಪಿಎಸ್ಸಿ, ಪಿಎಸ್ಐ ಮತ್ತು ಇತರ ಪರೀಕ್ಷೆಗಳಿಗೆ ಸ್ಪರ್ಧಾತ್ಮಕ ಮಾರ್ಗದರ್ಶನ ನೀಡಲು ಜಿಕೆಟುಡೇ ತಂಡದ ಪ್ರಯತ್ನವಾಗಿದೆ.
ಡೈಲಿ ಎಂಸಿಕ್ಯು ಸರಣಿ – 2022-2023
ಜಿಕೆಟುಡೇ ಯ ಡೈಲಿ ಎಂಸಿಕ್ಯು ಸರಣಿ – 2021-2022 ಗೆ ಕನ್ನಡದಲ್ಲಿ ಸುಸ್ವಾಗತ ಕೋರುತ್ತೇವೆ. ಈ ಸರಣಿಯಲ್ಲಿ, ನಾವು 20 ಪ್ರಶ್ನೆಗಳ ದೈನಂದಿನ ರಸಪ್ರಶ್ನೆಯನ್ನು ಪ್ರಕಟಿಸುತ್ತೇವೆ. ಈ ರಸಪ್ರಶ್ನೆಯು ಜಿಕೆಟುಡೇ ವೆಬ್ಸೈಟ್ ಮತ್ತು ಅಪ್ಲಿಕೇಶನ್ನಲ್ಲಿ ಪ್ರತಿದಿನ ಪ್ರಕಟವಾಗುವ ಜಿಕೆಟುಡೇ ಯ ಇಂಗ್ಲಿಷ್ ರಸಪ್ರಶ್ನೆಯ ಅನುವಾದಿತ ಆವೃತ್ತಿಯಾಗಿದೆ. ಇದು ನಿರಂತರ ಕೋರ್ಸ್ ಆಗಿರುತ್ತದೆ ಮತ್ತು ಪ್ರವೇಶವು ಎರಡು ಸಿಂಧುತ್ವ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ – 6 ತಿಂಗಳು ಮತ್ತು 1 ವರ್ಷ. ಈ ಯಾವುದೇ ಆಯ್ಕೆಗಳೊಂದಿಗೆ ಚಂದಾದಾರಿಕೆಯು ಈ ಕೋರ್ಸ್ನಲ್ಲಿನ ಎಲ್ಲಾ ಹಿಂದಿನ ವಿಷಯವನ್ನು ಅನ್ಲಾಕ್ ಮಾಡುತ್ತದೆ ಮತ್ತು ನಿಮ್ಮ ಆಯ್ಕೆಮಾಡಿದ ಮುಕ್ತಾಯ ದಿನಾಂಕದವರೆಗೆ ಭವಿಷ್ಯದ ನವೀಕರಣಗಳನ್ನು ಒದಗಿಸುತ್ತದೆ.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
1. ನಾನು ಯಾವಾಗಿನಿಂದ ಕನ್ನಡದಲ್ಲಿ ಪ್ರಶ್ನೆಗಳನ್ನು ಪಡೆಯಬಹುದು?
ನಾವು ಸೆಪ್ಟೆಂಬರ್ 2021 ರಿಂದ ಪ್ರಶ್ನೆಗಳನ್ನು ಭಾಷಾಂತರಿಸಲು ಪ್ರಾರಂಭಿಸಿದ್ದೇವೆ, ಆದ್ದರಿಂದ ಆ ತಿಂಗಳಿನಿಂದ ಪ್ರಶ್ನೆಗಳು ಲಭ್ಯವಿರುತ್ತವೆ.
2. ಈ ಪ್ರಶ್ನೆಗಳು ಜಿಕೆಟುಡೇ ಇಂಗ್ಲಿಷ್ ಪ್ರಶ್ನೆಗಳಂತೆಯೇ ಇದೆಯೇ ಅಥವಾ ಬೇರೆಯೇ?
ಅವು ಜಿಕೆಟುಡೇ ಯ ದೈನಂದಿನ ರಸಪ್ರಶ್ನೆಯ ಇಂಗ್ಲಿಷ್ ಪ್ರಶ್ನೆಗಳಿಂದ ಅನುವಾದಿಸಲಾದ ಪ್ರಶ್ನೆಗಳಾಗಿರುತ್ತವೆ. ಪ್ರತಿ ತಿಂಗಳ ಪ್ರಶ್ನೆಗಳ ಸಂಖ್ಯೆಯೂ ಒಂದೇ ಆಗಿರುತ್ತದೆ.
3. ಕೋರ್ಸ್ ಅನ್ನು ಗೂಗಲ್ ಅನುವಾದ ಉಪಯೋಗಿಸಿ ಅಥವಾ ಮಾನವ ಅನುವಾದದಿಂದ ತಯಾರಿಸಲಾಗಿದೆ?
ಈ ಕೋರ್ಸ್ ಅನ್ನು ಜಿಕೆಟುಡೇ ತಂಡದ ಸದಸ್ಯರು ನಿರ್ವಹಿಸುತ್ತಿದ್ದಾರೆ ಮತ್ತು ನಾವು ನಿಮಗೆ ಉತ್ತಮ ಗುಣಮಟ್ಟದ ಕನ್ನಡ ಅನುವಾದವನ್ನು ಒದಗಿಸುತ್ತೇವೆ.
ಈ ದಿನಗಳಲ್ಲಿ, ಕರ್ನಾಟಕದ ಹಲವಾರು ಫೋಟೋಕಾಪಿ ಅಂಗಡಿಗಳು ಮತ್ತು ಜೆರಾಕ್ಸ್ ಕೇಂದ್ರಗಳು ಜಿಕೆಟುಡೇ ಹೆಸರಿನಲ್ಲಿ ಗೂಗಲ್ ಅನುವಾದಿತ ಪೈರೇಟೆಡ್ ಕಂಟೆಂಟ್ ಮಾರಾಟ ಮಾಡುತ್ತಿವೆ, ಅವು ಅಧಿಕೃತವಾಗಿ ಅಥವಾ ನಿಖರವಾಗಿ ಜಿಕೆಟುಡೇ ವಿಷಯವಲ್ಲ. ಕೆಲವು ವಿಷಯವನ್ನು ಇತರ ವೆಬ್ಸೈಟ್ಗಳಿಂದ ನಕಲಿಸಲಾಗಿದೆ ಮತ್ತು ಜಿಕೆಟುಡೇ ಬ್ರ್ಯಾಂಡ್ನೊಂದಿಗೆ ಲೇಬಲ್ ಮಾಡಲಾಗಿದೆ. ಜಿಕೆಟುಡೇ ಗೆ ಹಲವಾರು ತಪ್ಪು ಮತ್ತು ಸಹಿ ಅಲ್ಲದ ಮಾಹಿತಿಗಳನ್ನು ಜಿಕೆಟುಡೇ ಗೆ ವರದಿ ಮಾಡಲಾಗಿದೆ ಮತ್ತು ಜಿಕೆಟುಡೇ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ಅಂತಹ ಜನರ ವಿರುದ್ಧ ನಾವು ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇನ್ನೂ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಅಂತಹ ಮೂಲಗಳಿಂದ ದೂರವಿರಲು ಮತ್ತು ಅಧಿಕೃತ ಜಿಕೆಟುಡೇ ವಸ್ತುಗಳಿಗೆ ಮಾತ್ರ ಹೋಗಲು ಸಲಹೆ ನೀಡುತ್ತೇವೆ.
4. ನಾನು ಮಾಸಿಕ ಸಂಕಲನಗಳನ್ನು ಪಡೆಯಬಹುದೇ?
ಹೌದು, ನಾವು ಶೀಘ್ರದಲ್ಲೇ ಈ ಕೋರ್ಸ್ನಲ್ಲಿ ಮಾಸಿಕ ಸಂಕಲನ ಮತ್ತು ಪರಿಷ್ಕರಣಾ ದಾಖಲೆಗಳನ್ನು ಹಾಕುತ್ತೇವೆ.
5. ಈ ಕೋರ್ಸ್ಗೆ ಯಾರು ಸೇರಬಹುದು?
ಈ ಸರಣಿಯ ಪ್ರಶ್ನೆಗಳು ಎಸ್ಎಸ್ಸಿ, ಬ್ಯಾಂಕಿಂಗ್, ಸಿಎಲ್ಎಟಿ, ವಿವಿಧ ಪ್ರವೇಶ ಪರೀಕ್ಷೆಗಳು, ವಿವಿಧ ರಾಜ್ಯ ಮಟ್ಟದ ಸಾರ್ವಜನಿಕ ಸೇವಾ ಆಯೋಗಗಳ ಪರೀಕ್ಷೆಗಳಾದ ಆರ್ಪಿಎಸ್ಸಿ, ಬಿಪಿಎಸ್ಸಿ, ಯುಪಿಎಸ್ಸಿ, ಎಂಪಿಪಿಎಸ್ಸಿ, ಎಂಪಿಎಸ್ಸಿ, ಕೆಪಿಎಸ್ಸಿ, ಟಿಎನ್ಪಿಎಸ್ಸಿ, ಜಿಪಿಎಸ್ಸಿ ಯಲ್ಲಿ ಸಾಮಾನ್ಯವಾಗಿ ಕೇಳಲಾಗುವ ಒನ್-ಲೈನರ್, ಸ್ಟ್ರೈಟ್ ಫಾರ್ವರ್ಡ್, ಫ್ಯಾಕ್ಟ್ ಆಧಾರಿತ ಪ್ರಶ್ನೆಗಳಿಗೆ ಪೂರಕವಾಗಿರುತ್ತದೆ.
ಕರ್ನಾಟಕ ರಾಜ್ಯದ ಪಿಸಿಗಳು, ಪಿಎಸ್ಐ ಮತ್ತು ಹಲವಾರು ಇತರ ಕರ್ನಾಟಕ ಪರೀಕ್ಷೆಗಳಿಗೂ ಸಹ ಇದು ಬಹಳ ಉಪಯುಕ್ತವಾಗಿರುತ್ತದೆ.
6. ಒಮ್ಮೆ ಖರೀದಿಸಿದ ನಂತರ ನಾನು ಅದನ್ನು ಹೇಗೆ ಪ್ರವೇಶಿಸಬಹುದು?
ಯಶಸ್ವಿ ಖರೀದಿಯ ನಂತರ, ಈ ಅಪ್ಲಿಕೇಶನ್ನಲ್ಲಿ ನಿಮ್ಮ ಕೋರ್ಸ್ಗಳ ಲೈಬ್ರರಿಗೆ ಈ ಕೋರ್ಸ್ ಅನ್ನು ಸೇರಿಸಲಾಗುವುದು.
7. ನನ್ನ ಲ್ಯಾಪ್ಟಾಪ್ನಲ್ಲಿ ನಾನು ಈ ಡಾಕ್ಯುಮೆಂಟ್ಗಳನ್ನು ಪ್ರವೇಶಿಸಬಹುದೇ?
ಈ ಅಪ್ಲಿಕೇಶನ್ನ ಎಲ್ಲಾ ವಿಷಯಗಳು ಆಂಡ್ರಾಯ್ಡ್ ಅಪ್ಲಿಕೇಶನ್ ಮೋಡ್ನಲ್ಲಿ ಮಾತ್ರ ಲಭ್ಯವಿದೆ. ಈ ಅಪ್ಲಿಕೇಶನ್ ಡೆಸ್ಕ್ಟಾಪ್ಗಳು ಮತ್ತು ಗೂಗಲ್ ಕ್ರೋಮ್ ನಂತಹ ಇಂಟರ್ನೆಟ್ ಬ್ರೌಸರ್ಗಳ ಮೂಲಕ ಪ್ರವೇಶವನ್ನು ಹೊಂದಿರುವುದಿಲ್ಲ. ಈ ಅಪ್ಲಿಕೇಶನ್ನ ಕೋರ್ಸ್ಗಳು ಜಿಕೆಟುಡೇ ವೆಬ್ಸೈಟ್ನಲ್ಲಿಯೂ ಲಭ್ಯವಿಲ್ಲ.
8. ಈ ಕೋರ್ಸ್ ಯಾವ ದಿನಾಂಕದವರೆಗೆ ಮಾನ್ಯವಾಗಿರುತ್ತದೆ?
ಒಮ್ಮೆ ನೀವು ಯಾವುದೇ ಮಾನ್ಯತೆಯ ಆಯ್ಕೆಯೊಂದಿಗೆ ಸೇರಿದಾಗ, ಹಿಂದಿನ ಎಲ್ಲಾ ವಿಷಯಗಳು ಸೆಪ್ಟೆಂಬರ್, 2021 ರಿಂದ ತೆರೆಯುತ್ತದೆ. ತದ ನಂತರ, ನಿಮ್ಮ ಮುಕ್ತಾಯ ದಿನಾಂಕದವರೆಗೆ ನೀವು ದೈನಂದಿನ ನವೀಕರಣಗಳನ್ನು ಸ್ವೀಕರಿಸಬಹುದು. “ನನ್ನ ಕೋರ್ಸ್ಗಳು” ಟ್ಯಾಬ್ನಲ್ಲಿ ನಿಮ್ಮ ಚಂದಾದಾರಿಕೆಯ ಮುಕ್ತಾಯ ದಿನಾಂಕವನ್ನು ನೀವು ಪರಿಶೀಲಿಸಬಹುದು.
9. ನನ್ನ ಲ್ಯಾಪ್ಟಾಪ್ನಲ್ಲಿ ಈ ಕೋರ್ಸ್ನ ಪಿಡಿಎಫ್ ಫೈಲ್ಗಳನ್ನು ನಾನು ಡೌನ್ಲೋಡ್ ಮಾಡಬಹುದೇ?
ಈ ಅಪ್ಲಿಕೇಶನ್ನಲ್ಲಿ ಕೋರ್ಸ್ ತೆರೆಯಲು ಮತ್ತು ಓದಲು ನಿಮ್ಮ ಮೊಬೈಲ್ ಸಾಧನಗಳಲ್ಲಿ ಪಿಡಿಎಫ್ ಡಾಕ್ಯುಮೆಂಟ್ಗಳನ್ನು ಸ್ವಯಂಚಾಲಿತವಾಗಿ ಆಫ್ಲೈನ್ನಲ್ಲಿ ಡೌನ್ಲೋಡ್ ಮಾಡಲಾಗುತ್ತದೆ. ಪಿಡಿಎಫ್ ಫೈಲ್ಗಳಿಗೆ (ಮೊಬೈಲ್ ಫೈಲ್ ಮ್ಯಾನೇಜರ್ / ಡೈರೆಕ್ಟರಿಯಿಂದ) ನೇರ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕೋರ್ಸ್ಗೆ ಸೇರಿಸಲಾದ ಪಿಡಿಎಫ್ ಫೈಲ್ಗಳು ಮತ್ತು ಈ ಅಪ್ಲಿಕೇಶನ್ನ ಎಲ್ಲಾ ಇತರ ಕೋರ್ಸ್ಗಳು ಯಾದೃಚ್ಛಿಕವಾಗಿ ರಚಿಸಲಾದ ಪಾಸ್ವರ್ಡ್ನಿಂದ ಸ್ವಯಂಚಾಲಿತವಾಗಿ ರಕ್ಷಿಸಲ್ಪಡುತ್ತವೆ ಮತ್ತು ಈ ಅಪ್ಲಿಕೇಶನ್ನಲ್ಲಿ ಮಾತ್ರ ತೆರೆಯಬಹುದಾಗಿದೆ. ಪಿಡಿಎಫ್ ಫೈಲ್ಗಳನ್ನು ನೇರವಾಗಿ ತೆರೆಯಲಾಗುವುದಿಲ್ಲ ಮತ್ತು ಮುದ್ರಿಸಲು, ನಕಲಿಸಲು, ಹಂಚಿಕೊಳ್ಳಲು ಇತ್ಯಾದಿ ಬಳಕೆಗೆ ಅವಕಾಶವಿರುವುದಿಲ್ಲ.
10. ನನ್ನ ಅಧ್ಯಯನಕ್ಕಾಗಿ ನಾನು ಹೈಲೈಟ್ ಮಾಡಬೇಕಾಗುವ ಮತ್ತು ಮುದ್ರಿಸಬೇಕಾಗುವ ಸಂದರ್ಭದಲ್ಲಿ, ಸುಲಭವಾಗಿ ಅದನ್ನು ಹೇಗೆ ಮಾಡಬಹುದು?
ಈ ಸೌಲಭ್ಯಗಳು ಲಭ್ಯವಿಲ್ಲ. ನಿಮ್ಮ ಮೊಬೈಲ್ ಸಾಧನದಲ್ಲಿ ಆರಾಮದಾಯಕ ಓದುವಿಕೆಗಾಗಿ ವಿಷಯವನ್ನು ಪ್ರವೇಶಿಸಲು ನೀವು ಬಯಸಿದರೆ ಮಾತ್ರ ದಯವಿಟ್ಟು ಈ ಕೋರ್ಸ್ಗೆ ಚಂದಾದಾರರಾಗಿ. ಪುಟ ಹೈಲೈಟ್ ಮಾಡುವಿಕೆ, ರಾತ್ರಿ ಮೋಡ್, ಬುಕ್ಮಾರ್ಕ್ಗಳು ಇತ್ಯಾದಿಗಳು ಸದ್ಯಕ್ಕೆ ಲಭ್ಯವಿರುವುದಿಲ್ಲ ಮತ್ತು ಇವುಗಳು ಯಾವಾಗ ಲಭ್ಯವಿರುತ್ತವೆ ಎಂಬುದನ್ನು ತಿಳಿಸಲು ನಾವು ಬದ್ಧರಾಗಿರುವುದಿಲ್ಲ.
11. ನಾನು ಈ ಪಿಡಿಎಫ್ ಫೈಲ್ಗಳನ್ನು ಮುದ್ರಿಸಬಹುದೇ?
ಈ ಇ-ಪುಸ್ತಕಗಳು ಮತ್ತು ದಾಖಲೆಗಳು ಮೊಬೈಲ್ ಗಾತ್ರ ಮತ್ತು ಮುದ್ರಣ ಸ್ನೇಹಿಯಾಗಿರುವುದಿಲ್ಲ ಏಕೆಂದರೆ ಪುಟದ ಗಾತ್ರ ಮತ್ತು ಫಾಂಟ್ ಗಾತ್ರವನ್ನು ಮೊಬೈಲ್ ವೀಕ್ಷಣೆಗೆ ಮಾತ್ರ ಸರಿಹೊಂದುವಂತೆ ಹೊಂದಿಸಲಾಗಿದೆ. ಆದಾಗ್ಯೂ, ಪಿಡಿಎಫ್ ಗಳಿಗೆ ನೇರ ಪ್ರವೇಶ ಲಭ್ಯವಿಲ್ಲ ಆದ್ದರಿಂದ ನೀವು ಈ ಫೈಲ್ಗಳನ್ನು ಮುದ್ರಿಸಲು ಸಾಧ್ಯವಾಗುವುದಿಲ್ಲ. ಅವು ಮೊಬೈಲ್ನಲ್ಲಿ ಓದಲು ಮಾತ್ರ.
12. ಯಾವುದೇ ಆಡಿಯೋ / ವಿಡಿಯೋ ಬೆಂಬಲಿಸುವಂತಹ ಉಪನ್ಯಾಸ/ಲೆಕ್ಚರ್ ಗಳಿವೆಯೇ?
ಈ ಕೋರ್ಸ್ ಮೂಲತಃ ಪಠ್ಯ ವಿಷಯವನ್ನು ಮಾತ್ರ ಹೊಂದಿರುತ್ತದೆ. ಇದರಲ್ಲಿ ಯಾವುದೇ ಆಡಿಯೋ-ವೀಡಿಯೋ ಲೆಕ್ಚರ್ ಗಳನ್ನು ಸೇರಿಸಲಾಗಿಲ್ಲ. ನಮ್ಮ ದೈನಂದಿನ ರಸಪ್ರಶ್ನೆಯ ಉಚಿತ ವೀಡಿಯೊಗಳಿಗಾಗಿ, ನೀವು ಕೇವಲ ಜಿಕೆಟುಡೇ ಯೂಟ್ಯೂಬ್ ಚಂದಾದಾರರಾಗಬಹುದು.